Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಸ್ವಾತಂತ್ರ್ಯದ(ದಿನಾಚರಣೆಯ) ಅಣಕ

ಇನ್ನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಬರಲಿದೆ. ಅಂದು ದೇಶವೇ ಸ್ವಾತಂತ್ರ್ಯ ದಿನ ಆಚರಿಸುತ್ತದೆ. ನನಗೂ ಆ ಬಗ್ಗೆ ತುಂಬಾ ಸಂತೋಷವಿದೆ. ಆದರೆ ನನಗೆ ಹಾಸ್ಯಾಸ್ಪದವೆನಿಸುವುದು ಅಂದು ಪ್ರಧಾನಿಗಳು ಸಹಸ್ರಾರು ಕಮಾಂಡೋಗಳ ಭದ್ರತೆಯ ನಡುವೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುವುದು. ಇದು ಸ್ವಾತಂತ್ರ್ಯದ ಸಂಕೇತವೇ? ಸ್ವಾತಂತ್ರ್ಯವೆಂದರೆ ಯಾರದೇ ಭಯವಿಲ್ಲದೆ ನಾವು ಬಯಸಿದಂತೆ(ಸ್ವೇಚ್ಛಾಚಾರವಲ್ಲ) ಇರುವುದು.ಆದರೆ ಆ ರೀತಿ ಉಗ್ರರ ಭಯದಲ್ಲಿ ಸಹಸ್ರಾರು ಕಮಾಂಡೋಗಳ ಭದ್ರತೆಯ ನಡುವೆ ಕೋಟಿಗಟ್ಟಲೆ ಹಣ ವ್ಯಯಿಸಿ ನಡೆಯುವ ಆ ಪ್ರಕ್ರಿಯೆ ಸ್ವಾತಂತ್ರ್ಯದ ಸಂಕೇತವೆಂದು ನನಗನಿಸುವುದಲ್ಲ.

ಇನ್ನೊಂದು ವಿಷಯವೆಂದರೆ ಇತ್ತೀಚೆಗೆ ಬರೀ ಗಾಂಧಿ ಮತ್ತು ನೆಹರೂರವರದ್ದು ಮಾತ್ರ ಗುಣಗಾನ ನಡೆಯುತ್ತಿದೆ. ನಾನೂ ಗಾಂಧೀಜಿಯವರನ್ನು ತುಂಬಾ ಗೌರವಿಸುತ್ತೇನೆ. ಆದರೆ ಅವರ ಜೊತೆ ಹೋರಾಡಿ ಹುತಾತ್ಮರಾದ ಲಕ್ಷಾತರ ಮಂದಿಯ ಪ್ರಾಣಕ್ಕೆ ಬೆಲೆಯೇ ಇಲ್ಲವೇ? ಅಂದು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ವೀರ ಸಾವರ್ಕರ್ ಮತ್ತು ಇತರರೆಲ್ಲರೂ ಹೋರಾಡಿ ಹುತಾತ್ಮರಾಗಿದ್ದಾರೆ. ಆದರೆ ಇಂದು ಅವರು ನಮ್ಮ ನಕಲಿ ಜಾತ್ಯತೀತವಾದಿಗಳ ದೃಷ್ಠಿಯಲ್ಲಿ ಭಯೋತ್ಪಾದಕರಾಗಿದ್ದಾರೆ. ಭಯೋತ್ಪಾದಕರೆಲ್ಲರೂ ದೇಶಪ್ರೇಮಿಗಳಾಗಿದ್ದಾರೆ. ಸಾವರ್ಕರ್ ಯಾರೆಂದು ಹೆಚ್ಚಿನವರಿಗೆ ತಿಳಿದಿಲ್ಲ.ಅವರು 50 ವರ್ಷ ಕರಿನೀರಿನ ಶಿಕ್ಷೆ ಅನುಭವಿಸಿದ್ದೂ ಗೊತ್ತಿಲ್ಲ. ಅದಕ್ಕೂ ಸಾಲದೆಂಬಂತೆ ಅವರ ಫಲಕವನ್ನು ಆ ಜೈಲಿನಿಂದ ನಕಲಿ ಜಾತ್ಯತೀತವಾದಿಗಳು ಕಿತ್ತೆಸೆದಿದ್ದಾರೆ.ಎಂತಹ ದೇಶಭಕ್ತಿಯಲ್ಲವೇ ನಮ್ಮದು?
ಇನ್ನಾದರೂ ಇಂತಹ ಇತರ ದೇಶಭಕ್ತರನ್ನು ನೆನೆಸಿ ಆ ಮೂಲಕವಾದರೂ ಅವರಿಗೆ ಗೌರವ ಸಲ್ಲಿಸೋಣವೇ?.

ಈ ಲೇಖನದ ಬಗ್ಗೆ ಓದುಗರ ಪ್ರತಿಕ್ರಿಯೆಗೆ ನನ್ನಸ್ವಾಗತವಿದೆ.
ಹಕ್ಕು ನಿರಾಕರಣೆ